ಮೀ ಟೂ
ವಳು ಅವನಿಗೆ ಲವ್ ಯು ಎಂದು ಮೆಸೇಜ್ ಮಾಡಿದಳು. ಮೀ ಟೂ ಎಂದ ಅವನು. ಆಮೇಲೆ ಅವರು ಮದುವೆಯಾದರು…ನಿರಂತರ ಜಗಳವಾಡಿದರು. ಕೊನೆಗೊಂದು ದಿನ ಡೈವೋಸ್೯ ತೆಗೆದುಕೊಂಡು ದೂರವಾದರು. ವರುಷಗಳು ಕಳೆದ ನಂತರ ಅವರಿಬ್ಬರು ಮತ್ತೆ ಮುಖಾಮುಖಿಯಾದರು. ಅವಳು ಹೇಳಿದಳು…ನಮ್ಮ ಆ ಜಗಳವನ್ನೆಲ್ಲಾ ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಅವ ಮೀ ಟೂ ಎಂದ.
***********************
ಈರುಳ್ಳಿ
ಧ್ಯರಾತ್ರಿ ಕುಡುಕ ಗಂಡ ಮನೆಗೆ ಬಂದಾಗ ಹೆಂಡತಿ ವಾಸನೆ ಬರುತ್ತೆ ಎಂದು ದೂರ ಸರಿದಳು. ‘ಥೂ…ಬಾಯಿ ವಾಸನೆ’ ಎಂದು ತನ್ನನ್ನೇ ಬೈದು ಕೊಂಡು ಅವಳಲ್ಲಿ ಈರುಳ್ಳಿ ತರಲು ಹೇಳಿದ. ಈ ನಡು ರಾತ್ರಿಯಲ್ಲಿ ಈರುಳ್ಳಿ ಹೆಚ್ಚುವಾಗ ಅವಳ ಕಣ್ಣಿಂದ ನೀರು ಬರಲಿಲ್ಲ….ಆ ಹುಡುಗಿಯ ಅವಸ್ಥೆ ನೋಡಿ ಈರುಳ್ಳಿಯೇ ಕಣ್ಣೀರು ಹಾಕುತ್ತಿತ್ತು.
***********************
ಕಣ್ಣೀರು
ನೆಯಲ್ಲಿ ಕಿತ್ತು ತಿನ್ನುವ ಬಡತನ. ಮಕ್ಕಳು ಊಟ ಮಾಡಿ ಮಲಗಿದ್ದವು. ಪಕ್ಕದಲ್ಲಿದ್ದ ಗಂಜಿ ಪಾತ್ರದಲ್ಲಿ ಒಂದಿಷ್ಟು ಗಂಜಿ ನೀರು ಉಳಿದುಕೊಂಡಿತ್ತು. ತನ್ನ ಬದುಕನ್ನೇ ನೆನೆದು ಆ ತಾಯಿ ಬರೀ ಗಂಜಿ ನೀರನ್ನು ಕುಡಿದಳು. ಅವಳ ಕಣ್ಣೀರು ಅದನ್ನು ಉಪ್ಪಾಗಿಸಿತ್ತು.
***********************
ವಿರಹ
ಬ್ಬರು ಪ್ರೇಮಿಗಳು ದೂರವಾಗಿದ್ದರು. ವಿರಹ ವೇದನೆಯಲ್ಲಿ ಅವನು ಬಿಯರ್ ಕುಡಿಯತೊಡಗಿದ. ಇವಳು ಊಟ ಬಿಟ್ಟಳು. ಬಿಯರ್ ಕುಡಿದು ಅವನ ಹೊಟ್ಟೆ ದೊಡ್ಡದಾಗಿತ್ತು. ಅವಳು ಸೊರಗಿ
ಹೋಗಿದ್ದಳು. ಬಾರ್ ನಲ್ಲಿ ಬಿಲ್ ಪಾವತಿಸಲು ಅವ ತನ್ನ ಮೊಬೈಲನ್ನೇ ಮಾರಿದ. ಅವಳ ಮೊಬೈಲ್ ನಲ್ಲಿ ಕರೆನ್ಸಿ ಹಾಗೇ ಉಳಿದು ಕೊಂಡಿತ್ತು.
***********************
ಸಂಶಯ
ಕೆಯಲ್ಲಿ ಇಂದೇ ಪ್ರೀತಿಯ ನಿವೇದನೆ ಮಾಡಬೇಕೆಂದು ಪ್ರೇಮಿಗಳ ದಿನದಂದು ಅವ ಚೆಂಗುಲಾಬಿ ಹಿಡಿದು ಕಾದು ನಿಂತಿದ್ದ. ತನ್ನ ಹುಡುಗಿ ಇನ್ಯಾವುದೋ ಹುಡುಗನಲ್ಲಿ ಮಾತನಾಡುತ್ತಿರುವುದನ್ನು ದೂರದಿಂದಲೇ ನೋಡಿದ. ಸಂಶಯದ ಬೇಗೆ ಹೆಚ್ಚಾಯಿತು. ಕೈಯಲ್ಲಿದ್ದ ಗುಲಾಬಿಯನ್ನು ಕಿವುಚಿ ತಿಪ್ಪೆಗೆಸೆದ. ಅಣ್ಣನ ಜತೆ ಬರುತ್ತಿದ್ದ ಆ ಹುಡುಗಿಯ ಜೀವನ ಅರಳಿತು.
Advertisements